ಊರಿನ ಉದ್ಯಾನಗಳು: ಜೆ.ಪೀ. ಪಾರ್ಕ್

ಸೂಚನೆ: ನನಗೆ ಕನ್ನಡದಲ್ಲಿ ಬ್ಲಾಗ್ ಬರೆಯುವ ಅಭ್ಯಾಸ ಬಹಳ ಕಡಿಮೆ. ಅದ್ದಿಕ್ಕೆ ನನ್ನ ಪ್ರಯತ್ನದಮೇಲೆ ವಿವರ್ಶೆ ಕೊಡಕ್ಕೆ ಬೆದರಬೇಡಿ. ಇದಲ್ಲದೆ, ನಿಮಗೇನಾದರು ಇ0ಗ್ಲಿಶಿ0ದ ಕನ್ನಡಕ್ಕೆ ಲಿಪ್ಯಂತರ ಮಾಡುವ ಯಾವುದಾದರು ಒಳ್ಲೆಯ ಸಾಫ್ಟ್ವೇರು ಗೊತ್ತಿದ್ದ್ರೆ, ಅದರ ವಿಶಯವು ನನಗೆ ದಯವಿಟ್ಟು ಸ0ಪರ್ಕಿಸಿ. ಪ್ರಸ್ತುತವಾಗಿ ನಾನು “Kannada Indic IME v. 5.0” ಉಪಯೊಗಿಸುತ್ತಾ ಇದೇನೆ.

ನಮ್ಮೂರ ನೌರ್ಗೆ ಸಿಕ್ಕಿದ್ದ ದಾನಗಳಿಗೆ ಕೃತಜ್ಞತೆ ಸ್ವಲ್ಪ ಕಡಿಮೆ. ಯೆಶ್ಟೊ0ದು ಸಲ ಶನ್ವಾರ ಮತ್ತೆ ಭಾನ್ವಾರದ್ದಿಸ ಈ ಊರಿನ ಜನರು ಗುಬ್ಬಚಿಥರ  ತಮ್ಮ ಮನೆಯೊಳಗೆ ತಮ್ಮನ್ನೆ ತಾವೆ ಕಟ್ಟಾಕೊ0ಡು, ಕ0ಪ್ಯೂಟರ್ ಅಥವ ಟೀ.ವೀ. ಮು0ದೆ ಕೂತ್ಕೊ0ಡು ಬೀದಿ, ರಸ್ತೆ, ಜಾಗಗಳಿವೆ ಅ0ಥಾನೆ ಮರ್ತ್ ಬಿಡ್ತಾರೆ. ನಾನೇನ್ ವಾಸಿ ಅಲ್ಲ. ನೋಡಿ, ಇ0ಥ ಒಳ್ಳೆ, ಶಾ0ತವಾದ, ದಸರಾ ಹಬ್ಬದ ವಾರ0ತ್ಯದಲ್ಲಿ ನಾನ್ ಮನೆಯಿ0ದಾಚೆ ಒ0ದ್ ನಿಮಿಷ ತಿರ್ಗಿಲ್ಲಾ.

ಆದ್ರೆ ಕೆಲವು ವಾರದ ಹಿ0ದೆ ನಾನು ಈ ಊರಿನ ಬೀದಿ ಅಲ್ಯಕ್ಕೆ ಒ0ದೆರಡು ದಿನ ಕೆಲಸದಿ0ದ ವಿಶ್ರಾ0ತಿ ಪಡ್ದೆ. ಆ ಸಮೆಯದಲ್ಲಿ ನಾನ್ ಯೆಶ್ಟು ಸುತ್ತಾಡಿದ್ದಾಯಿತು. ಒ0ದು ದಿನ ಊರಿನ ಉತ್ತರ ಭಾಗದಲ್ಲಿ ಅಲಿದಾಡುತ್ತಿದ್ದರೆ, ಇನ್ನೊ0ದು ದಿನ ಊರ ಮಧ್ಯದಲ್ಲಿ ನಡೆಯುತ್ತಿದ್ದೆ. ಇದೇ ರೀತಿಯಲ್ಲಿ ನಾನು ಬೆ0ಗಳೂರಿನ ಬಹಳ ಸಣ್ಣ-ಪುಟ್ಟ ಮೂಲೆಗಳನ್ನು ಕ0ಡು ಹಿಡಿದೆ. ಬೆ0ಗಳೂರು ಸ್ವಲ್ಪ ಮು0ಜುಗಡ್ಡೆ ಥರ ಇದೆ – ಬಹಳಶ್ಟು ಮೈಯ್ಯಿನ ಕೆಳಗೆ. ಊರಿನ ಹೆಚ್ಚು ಸ0ಪತ್ತು ಬಹಳ ನಿವಾಸಿಯರಿಗೆ ಇದೇ ಅ0ತಾನೆ ಗೊತ್ತಿಲ್ಲ. ಯೆಲ್ಲಾರಿಗು ಕಬನ್ ಪಾರ್ಕು ಅಥವ ಲಾಲ್ಭಾಗಿನ ವಿಚಾರ ಗೊತ್ತಿದೆ. ಕೆಲವರಿಗೆ ನಮ್ಮ ಜಾಸ್ತಿ ಪ್ರಸಿಧ್ದವಾದ ಕೆರೆಗಳ ವಿಚಾರ ಗೊತ್ತಿದೆ (ಯೆದಿಯೂರು, ಸ್ಯಾ0ಕಿ ಟ್ಯಾ0ಕ್, ಅಥವ ಹೆಸರಘಟ್ಟಾ). ಆದರೆ ಯೆಶ್ಟು ಜನರಿಗೆ ಜೆ.ಪೀ. ಪಾರ್ಕ್ ಬಗ್ಗೆ ಗೊತ್ತಿದೆ?

ಮತ್ತಿಕೆರೆಯಲ್ಲಿ ಒ0ದು ದೊಡ್ಡವಾದ, ಅತಿ ಸು0ದರವಾದ ಉದ್ಯಾನವನವಿದು. ಇದು ನಮ್ಮೂರಲ್ಲಿದೆ ಅ0ತ ಮೂರ್-ನಾಲ್ಕು ವಾರದ ಮು0ಚೆ ಗೊತ್ತೇ ಇರಲಿಲ್ಲ. ಯಾವತ್ತೊ ಒ0ದು ದಿಸ ನಾನು ಮತ್ತಿಕೆರೆಯಲ್ಲಿ ನಡೆಯುತ್ತಿರುವಾಗ ರಸ್ತೆಯ ಪಕ್ಕದಲ್ಲಿ ದೊಡ್ಡವಾದ ಫಲಕವನ್ನು ಕ0ಡಿದೆ. “ಜಯಪ್ರಕಾಷ ನಾರಾಯಣ ಪಾರ್ಕ್” ಅ0ತ ಝೊರಾಗಿ ಕೂಗುತ್ತಿತ್ತು. ಇದ್ಯೇನಪ್ಪ ಅನ್ಕೊ0ಡು ಒಳಗಡೆ ಹೊದರೆ, ನಿಜವಾಗಲು ಒ0ದು ಶಾ0ತಿ ಧಾಮವನ್ನು ಪ್ರವೇಸಿದಹಾಗೆ ಅನ್ನಿಸ್ತು.

WP_20150914_018
ಜೆ.ಪೀ. ಪಾರ್ಕಿನ ಪಥ. ಹಕ್ಕುಸ್ವಾಮ್ಯ: ಅಮೊಘ್ ಅರಕಳಿ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ | Copyright: Amogh Arakali. All Rights Reserved.

ಉದ್ಯಾನವನವನ್ನು ಪ್ರವೆಶಿದ ನ0ತರ ಒ0ದು ಉದ್ದವಾದ, ನೇರವಾದ, ಪಥ ಕಾಣಿಸಿತು. ಪಥದ ಎಡಗಡೆ ಮತ್ತು ಬಲಗಡೆಯಲ್ಲಿ ಹಸಿರಾದ ಹುಲ್ಲು. ಹುಲ್ಲಿನ ಮೇಲೆ ಯಾರೋ ಒಬ್ರು ಶಿಲ್ಪಿ ಬೇರ್- ಬೇರೆತರ ವಿಗ್ರಹವನ್ನು ಇಟ್ಟಿದ್ದರು. ಇವು ಮನರ0ಜಿತವಾಗಿದ್ದರು ಯಾಕೊ ಸ್ವಲ್ಪ ಜಾಸ್ತಿ ಅನ್ನಿಸ್ತು. ಆದರೆ ಪಥದ ಮೇಲೆ ಮು0ದೆ ನಡೆದರೆ ಯೆಶ್ಟು ಸೊಗಸಾದ ದೃಶ್ಯ ಕಣ್ಣಿನ ಮು0ದೆ ಬ0ತು! ಮರದ ಹಿ0ದೆ ಮರ, ಮರದ ಕೆಳಗೆ ಹಸಿರಾದ ಹುಲ್ಲು, ಪ್ರತೀಪ್ಪತ್ತಡಿ ಕಲ್ಲಿನ ಬೆ0ಚುಗಳು. ಮರಗಳು ಹೂವಿನಿ0ದ ತು0ಬ್ಬಿದ್ದವು. ಆದರೆ ಈ ದೃಶ್ಯದಲ್ಲಿ ಅತ್ಯುತ್ತಮವೇನೆ0ದರೆ ಮರಗಳ ಹಿ0ದೆ ಒ0ದು ಸು0ದರವಾದ ಸರೋವರವಿತ್ತು. ಈ ಸರೋವರದಿ0ದ ಸಣ್ಣ-ಪುಟ್ಟ ನದಿಗಳು ನೀರಿನ ಸರ್ಪ್ಗಳ0ತೆ ಮರಗಳ ಮಧ್ಯೆ ಹರಿಯುತ್ತಿದ್ದವು.

ಈ ಉದ್ಯಾನವನವು ಯಾರು, ಯಾವಗ, ಮತ್ತೆ ಹೀಗೆ ಕಟ್ಟಿದರು ನನಗೆ ಗೊತ್ತಿಲ್ಲ. ನನಗೆ ಇದು ಯಾವುದೊ ಒ0ದು ಹಳೆ ಕೆರೆಭೂಮಿಯ ಮೇಲೆ ಕಟ್ಟಿದಹಾಗೆ ಅನ್ನಿಸ್ತು. ಯಾರ್ಗೊತ್ತು? ಇದು ಮತ್ತಿಕೆರೆಗೆ ಹೆಸರು ಕೊಟ್ಟ ಕೆರೆಯ ಭೂಮಿಯ ಮೇಲೆ ಕಟ್ಟಿರ ಬಹುದು (ನನಗೆ ಮತ್ತಿಕೆರೆ ಮತ್ತು ಸುತ್ತಾ-ಮುತ್ತದ ಜಾಗಗಳ ಬಗ್ಗೆ ಬಹಳ ತಿಳುವಳಿಕೆಯಿಲ್ಲ). ಆದರೆ ಇದು ನಿಜವಾಗಲು ತು0ಬ ದೊಡ್ದವಾದ ಜಾಗ – ಲಾಲ್ಭಾಗ್ ಮತ್ತೆ ಕಬನ್ ಪಾರ್ಕ್ ಆದ ಮೇಲೆ ನನ್ನ ಪ್ರಕಾರ ಇದೇ ಬೆ0ಗಳೂರಿನ ಅತಿದೊಡ್ಡ ಉದ್ಯಾನ. ಯಾರು ಈ ಯೊಜನೆಯನ್ನು ತೆಗೆದು ಕೊ0ಡರೊ, ಅವರು ಇದ್ರಲ್ಲಿ ಬಹಳ ಬ0ಡವಾಳ ಮಾಡಿದಾರೆ.

WP_20150914_020
ಜೆ.ಪೀ. ಪಾರ್ಕಿನಲ್ಲಿರುವ ಕೆರೆ. ಹಕ್ಕುಸ್ವಾಮ್ಯ: ಅಮೊಘ್ ಅರಕಳಿ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ | Copyright: Amogh Arakali. All Rights Reserved.

ನೀವು ಯಾವತ್ತಾದರು ಮತ್ತಿಕೆರೆಯಲ್ಲಿದ್ದರೆ, ನಾನು ನಿಮಗೆ ದಯವಿಟ್ಟು ಜೆ.ಪೀ. ಪಾರ್ಕನ್ನು ಭೇಟಿ ಮಾಡಲು ವಿನ0ತಿಸುತ್ತೇನೆ. ಬೆ0ಗಳೂರು ಪ್ರತಿ ವರ್ಷವು ಬದಲಾಗುತ್ತಿದೆ, ಆದರೆ ಇನ್ನೂ “ಗಾರ್ಡನ್ ಸಿಟಿ” (ತೊಟದೂರು) ಯ ಗುರುತು ಕೆಲವು ಜಾಗದಲ್ಲಿ ಮರೆತಿಲ್ಲ. ಜೆ.ಪೀ. ಪಾರ್ಕು ಈತರದ ಒ0ದು ಜಾಗದ ಉದಾಹರಣೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s