ಒಂದು ಒಳ್ಳೇ ಹಳೆಗಾಲದ ಗೊಣಗು

ನನಗೆ ಇವಾಗೆಲ್ಲ ಪತ್ರಿಕೆ ಓದಬೇಕು ಅಥವಾ ಟೀ.ವೀ. ಮೇಲೆ ಸಮಾಚಾರ ನೋಡಬೇಕು ಅಂದರೆ ಬಹಳ ಸುಸ್ತಾಗತ್ತೆ. ಹೇಗಪ್ಪ ನಾವೆಲ್ಲಾ ಈ ಜಾಗಕ್ಕೆ ಬಂದ್ವಿ ಅಂದು ಕೇಳ್ಕೋಬೇಕು. ವಾತವರಣದಲ್ಲಿ ಎಷ್ಟು ಕೋಪಾ, ಎಷ್ಟು ಕೋಪಾ ಅಂದ್ರೆ…ಯಾಕೋ ಎಲ್ಲಾರಿಗೂ ಯಾವೊದೋ ಖಾಯಿಲೆ ಬಂದಾಗಿದೆ. ಇಂಟರ್ನೆಟ್ ಮೇಲೆ ಹೋದರೆ, ದಬೆ-ದಬೆ ಅಂತ ಬೀಳುವ ಸಿಟ್ಟೂ, ಜೋಗಿನ ಜಲಪಾತದ ಕೆಳಗೆ ನಿಂತ ತಲೆ ಮೇಲೆ ಬೀಳುವ ನೀರಿನಂತೆ.

ಯಾಕೈಯ್ಯ ಕಾಲಗಳು ಹೀಗಾಗಿವೆ? ಯಾವಾಗಲೋ ಹಿಂದಿನ ಕಾಲದಲ್ಲಿ ಇಂಟರ್ನೆಟ್ ಮೇಲೆ ಹೋಗುವುದು ಅಂದರೆ, ನಿಜವಾದ ಪ್ರಪಂಚವನ್ನು ತಪ್ಪಿಸುವುದಕ್ಕೆ. ಈಗ ನಿಜವಾದ ಪ್ರಪಂಚ ಯಾವುದು, ಮಾಯವಾದ ಪ್ರಪಂಚ ಯಾವುದು ಹೇಳುವುದಕ್ಕೆ ಕಷ್ಟವಾಗತ್ತೆ. ನಿಜವಾದ ಪ್ರಪಂಚದಲ್ಲಿ ಯಾರೋ ಒಬ್ಬರು ಆತನ ಭೇಟಿ ಮಾಡ್ಕೊಂಡು, “ಹೇಗಿದ್ರ ಸ್ವಾಮೀ?” ಅಂತ ನಕ್ಕೊಂಡು, ಪ್ರತಿದಿನ ನೋಡದಾಗೆಲ್ಲ ಕಿಸಿಕೊಂಡು ಮನೆಗೆ ಹೋದರೆ, ಇಂಟರ್ನೆಟ್ ಮೇಲೆ ಅದೇ ಆತ ಯಾವುದೋ ಒಂದು ವಿಷಯದ ಕಾರಣದಿಂದ, ಪಕ್ಕದ ಬೀದಿಯ ಕತ್ತೆ ಮೇಲೆ ಶಾಪ ಹಾಕ್ತಾಇರ್ತಾರೆ. ಪಾಪ, ಆ ಕತ್ತೆ ಯೇನ್ ಮಾಡ್ತೋ. ಆತನಿಗೆ “ಸ್ಪ್ಲಿಟ್ ಪರ್ಸನಾಲಿಟಿ ಸಿಂಡ್ರೋಮ್” ಇದೆಯೋ ಇಲ್ಲವೋ ಅಂತ ಯೋಚಿಸಬೇಕು.

ವರ್ಸ್ಟ್ ಅಂದ್ರೆ, ಆ ಹಾಳಿದ್ ಮೊಬೈಲ್ ಫೋನ್ಗಳು. ಫೋನು ನನ್ನ ಜೀವನದಲ್ಲಿ ಬಂದಾಗಲಿಂದ, ನನ್ನ ದಿನದ ಪ್ರತ್ಯೇಕ ನಿಮಿಷವನ್ನು ಆಳುವುದಕ್ಕೆ ಪ್ರಯತ್ನ ಮಾಡ್ತಾ ಇದೆ. ಮೊದಲೇನು ಪರವಾಗಿರಲಿಲ್ಲ – ಆಚೆ ಹೋದಾಗ, ಏನಾದರು ಅಪಘಾತವಾದರೆ ಫೋನ್ ಅನ್ನು ಉಪಯೋಗಿಸಬಹುದು ಅಂದುಕೊಂಡು, ಜೇಬಿನಲ್ಲಿ ಇಟ್ಟುಕೊಂಡು ಹೋಗ್ತಾ ಇದ್ದೆ. ಈಗ ಫೋನು ಜೇಬಿನಲ್ಲಿ ಇರುವುದೇ ಒಂದು ಅಪಘಾತ. “ಜೇಬಿನಿಂದಲೇ ಇಡೀ ಭೂಲೋಕವನ್ನು ಸಂಪರ್ಕಿಸಿ” ಅಂತ ಫೋನು ಮತ್ತೆ ಇಂಟರ್ನೆಟ್ ಕಂಪನಿಗಳು ಹೇಳ್ತಾರೆ. ಅಣ್ಣಾ-ಗುರು, ನಮ್ಮ ಬ್ರಮ್ಹಾಂಡ ನಮ್ಮ ಜೇಬಿಗಿಂತ ದೊಡ್ದದಾಗಿರುವುದಕ್ಕೆ ಕಾರಣಗಳಿವೆ. ಇಡೀ ಭೂಲೋಕ ನಮ್ಮ ಜೇಬಿನಲ್ಲೆ ಕೂತಿದ್ದರೆ, ನಾವು ಭುಲೋಕವನ್ನು ತಪ್ಪಿಸ್ಸುವುದು ಹೇಗೋ? ಕಾಲ್ ಮೇಲೆ ಕಾಲು, ಎಸ್ಸ್.ಎಮ್ಮ.ಎಸ್ಸ್ ಮೇಲೆ ಎಸ್ಸ್.ಎಮ್ಮ.ಎಸ್ಸು – ಮತ್ತೆ ಆ ದರಿದ್ರ “ವಾಟ್ಸಾಪ್” ಬಗ್ಗೆ ಕೇಳಲೇ ಬೇಡಿ.

ಸರಿ, ಕಳಸಲೇ ಬೇಕು ಅಂದರೆ, ಏನೋ ಒಳ್ಳೆಯ ಕಥೆಗಳು, ಮನೋರಂಜಕವಾದ ಮಾಹಿತಿ ತುಂಡುಗಳು, ಬುದ್ಧಿ ಚಿಗುರ್ಸುವ ಲೇಖನಗಳು ಕಳಿಸಿ. ಆದರೆ “ಈ ಮೂರ್ತಿಯ ಚಿತ್ರ ೧೦೦೦ ಜನಕ್ಕೆ ಫಾರ್ವರ್ಡ್ ಮಾಡಿದ್ರೆ ನಿಮ್ಮ ಅಮೇರಿಕಾ ವೀಸಾ ಅರ್ಜಿಗೆ ಲಾಭವಾಗತ್ತೆ” ಅಥವಾ “ಭಾರತದನವನಾಗಿ ಹೆಮ್ಮೆ! ನಿಮಗೆ ಗೊತ್ತಾ…ಸಂಸ್ಕೃತವನ್ನು ಉನೆಸ್ಕೋ ‘ಬೆಸ್ಟ್ ಪ್ರೊಗ್ರಾಮೆಬಲ್ ಲ್ಯಾಂಗ್ವೇಜ್’ ಇನ ಬಹುಮಾನ ಕೊಟ್ಟಿದ್ದಾರೆ” – ಇಂತ ವ್ಯರ್ಥವಾದ ತುತ್ತುಗಳು ದಯವಿಟ್ಟು ನಿಮ್ಮ ಜೋತ್ತಗೆ ಬಚಿಟ್ಟುಕೊಳ್ಳಿ. ಬೇರೆ ಯಾರಿಗೂ ತೋರಿಸದಿಲ್ಲದಿದ್ದರೆ, ನಿಮ್ಮದೇ ಯೂ.ಎಸ್ಸ್ ವೀಸಾ ಅರ್ಜಿಗೆ ಲಾಭವಾಗುತ್ತದೆ. ಇದೂ ಮಾಡಕ್ಕಾಗದೀರ ಇದ್ರೆ, ದಯವಿಟ್ಟು ಕೋಪಗೊಂಡ, ದ್ವೇಷ ತುಂಬಿದ ಫಾರ್ವರ್ಡ್ ಮಾತ್ರ ಕಳಿಸಬೇಡಿ. ನನ್ನ ಜೀವನದಲ್ಲಿ ಸಾಕಷ್ಟು ಕೋಪ ಆಗಲೇ ಇದೆ. ನಿಜ ಹೇಳಿದ್ರೆ, ಸಲ್ಪ ಸರ್ಪ್ಲುಸ್ ಆಗ್ತಾಯಿದೆ – ಇಷ್ಟೊಂದು ಸಿಟ್ಟು ಹಿಡಿದುಕೊಂಡಿದ್ರೆ,  ಬೇರೆಯವರಿಗೆಲ್ಲ ಹೊಟ್ಟೆ-ಕಿಚ್ಚಾಗತ್ತೆ. ದಯವಿಟ್ಟು ನನ್ನನು ಬಿಟ್ಟು, ಸಲ್ಪ ಸಿಟ್ಟು ಬೇರೆಯವರ ಜೊತೆಗೂ ಹಂಚಿಕೊಳ್ಳಿ.

ಈ ಮಹಾಸ್ವಾಮಿಗಳು ಬಿಟ್ಟು, ನಮ್ಮ ಬ್ಯಾಂಕ್ಗಳು, ಫೋನ್ ಕಂಪನಿ ಗಳು, ಅಂಗಡಿಗಳು, ಯಾವುದೋ ಎರಡು ಸಲ ಉಪಯೋಗಿಸಿದ್ದ ಟ್ಯಾಕ್ಸಿ ಸರ್ವಿಸ್ ಗಳು, ಎಲ್ಲಾ ಅಣ್ಣ-ತಮ್ಮಂದಿರು, ಅಕ್ಕಾ-ತಂಗಿಯರೂ ಆಟವನ್ನು ಸೇರಿದ್ದಾರೆ. ಏನೋ ಒಂದು ಆಫರ್ ಅಂತೆ, ಏನೋ ಒಂದು ಡಿಸ್ಕೌಂಟ್ ಅಂತೆ, ಏನೋ “ಕ್ಯಾಶ್-ಬ್ಯಾಕ್” ಅಂತೆ – ಬೆಳೆಗೆ ಶುರುವಾದರೆ ರಾತ್ರಿಯತಂಕ ಬಿಡಲ್ಲ. ಅದನ್ನೂ ಬಿಡಿ – ಈ ಭೂಪ-ರಾಯರ ನಂತರ, ನಮ್ಮ ನಿಜವಾದ ಭೂಪರು ತುಂಬಾ ಹಿಂದೆ ಇರುವುದಕ್ಕೆ ಸಾಧ್ಯವೇ? ಇವತ್ತಿನ ಭೂಪರಿಗೆ ಯಾಕೋ ಆಧರಿನ ಹುಚ್ಚು ಬಂದ ಬಿಟ್ಟಿದೆ. ಏನು ನೋಡಿದರು, ಎಲ್ಲಿ ಹೋದರು “ಆಧಾರ್ ಸೇರಿಸ್ದ್ರಾ? ಆಧಾರ್ ಸೇರಿಸ್ದ್ರಾ? ಆಧಾರ್ ಸೇರಿಸ್ದ್ರಾ?” ಅಂತ ಪ್ರಶ್ನೆ ಕೇಳದೇ ನಿಲ್ಲಿಸುವುದಿಲ್ಲ. ಪ್ರತಿದಿನ ಕನಿಷ್ಠ ಮೂವತ್ತು ಎಸ್ಸ್.ಎಮ್ಮ್.ಎಸ್ಸ್ ಕಳಿಸ್ತಾರೆ. “ಅಂತಿಮ ದಿನಾಂಕ ಬಂತು…ಸೇರಿಸ್ದ್ರಾ?” ಅಂತ ಕೇಳ್ತಾರೆ. ಮಹಾಶಯರೇ, ನೀವು ನಿಮ್ಮ ಆಧಾರ್ ಸೇರಿಸುವ ಅಂತಿಮ ದಿನಾಂಕ ಎಷ್ಟೊಂದು ಸಲ ಹೇಳಿದೀರ ಅಂದ್ರೆ, ಅದು ನಮ್ಮದೆ ಅಂತಿಮ ದಿನಾಂಕ ಅಂತ ಅಂಸತ್ತೆ.

ಏನಾದ್ರು ಆಗ್ಲಿ, ಈ ಗೋಳು ನಿಲ್ಲುವುದಿಲ್ಲ. ಜನರು ಜನರಾಗೆ ಇರ್ತಾರೆ. ಆದ್ರೆ, ಈ ಗೊಳಿಂದ ನಮ್ಮನ್ನು ನಾವೇ ಕಾಪಾದಿಸುಕೊಳ್ಳಬೇಕೆಂದರೆ, ಹೇಗೆ ಮಾಡುವುದು? ಪೂರ್ತಿ “ಸ್ವಿಚ್-ಆಫ್” ಮಾಡುವುದಕ್ಕೂ ಸಾಧ್ಯವಿಲ್ಲ. “ಆಲ್ವೇಸ್-ಆನ್” ಸ್ತಿಥಿನೂ ಸರಿಯಾಗಿಲ್ಲ. ಆಧರೆ ಅರ್ಧದಾರಿ ಹೋದರೆ, ಆ ದಾರಿಯ ಕೇಂದ್ರಬಿಂದು ಯಾವುದು ಅಂತಾನೂ ಸರಿಯಾಗಿ ಗೊತ್ತಿಲ್ಲಾ. ಯೇನು ಮಾಡದೋ.

 

 

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s