ಚುನಾವಣೆಯ ಫಲಿತಾಂಶಗಳ ಬಗ್ಗೆ ಒಂದೆರಡು ಮಾತು | On the Outcomes of Elections

ಕನ್ನಡ ವಿಭಾಗೆ (Scroll down for the English section)

[ನಿಮಗೆ ಈ ಪೋಸ್ಟನ್ನು ಓದುವುದಕ್ಕೆ ಕಷ್ಟವಾದರೆ, “ಸೌಂಡ್ ಕ್ಲೌಡ್” ಮೇಲೆ ನಾನು ಇದನ್ನು ಓಡುತ್ತಿರುವುದನ್ನು ಕೇಳಬಹುದು]

ಕರ್ನಾಟಕದಲ್ಲಿ, ಹಿಂದಿನ ೧೫-೨೦ ವರ್ಷಗಳಲ್ಲಿ, ಬಹಳ ಸರ್ಕಾರಗಳು ಬಂದಿವೆ, ಬೆಳದಿವೆ, ಬಿದ್ದಿವೆ. ಕಛೇರಿ-ಇಚ್ಛೆಯಿಂದ ಪಕ್ಷಗಳು ಗುಂಪು ಮಾಡಿಕೊಂಡು ಬೇರೆ ಗುಂಪುಗಳನ್ನೂ ಸೋಲಿಸಿವೆ, ಬೇರೆ ಗುಂಪುಗಳಿಂದ ಸೋತಿವೆ. ಇವೆಲ್ಲಕ್ಕೆ ನಾನು ಸಾಕ್ಷಿಯಾಗಿದ್ದರೂ, ನನಗಂತೂ ಇಂತಹ ಗೊಂದಲಮಯವಾದ ಚುನಾವಣೆಯು ನೆನಪಿಲ್ಲ.

ಈ ಗಚಿ-ಪಿಚಿ ಎಲ್ಲಾ ಸಾಧಾರಣ ಪ್ರಜೆಗಳ ಹಿಡಿತದಲ್ಲಿ ಇಲ್ಲ. ನಾನು ಮುಂಚೆ ಹೇಳಿದಂತೆ, ನಾವು ರಾಜ್ಯಸರ್ಕಾರದ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಥವ ಪಕ್ಷಗಳಿಗೆ ಮತ ಕೊಡುವ ಬದಲು, MLA ನವರಿಗೆ ನೀಡುತ್ತೇವೆ. MLAನವರು ವಿಧಾನ ಸೌಧೆಯಲ್ಲಿ ಕುಳಿತಿದ ನಂತರ, ಮತದಾರರ ಹಿಡಿತವು ಮಾಯವಾಗುತದ್ದೆ. ವ್ಯವಸ್ಥೆಯ ರೂಪವೇ ಇದು.

MLAಗಳ ಚುನಾವಣೆಯ ನಂತರ, MLAಗಳು ನ್ಯಾಯ-ಸಂವಿಧಾನದ ತಕ್ಕಂತೆ ಸರಿಯಾದ ಪಥದಲ್ಲಿ ನಡೆದು, ಪ್ರಜಗಳ ಇಚ್ಛೆಯನ್ನು ನೆನಪಿಸಿಕೊಂಡು, ಸರಿಯಾದ ಸಚಿವರನ್ನು ಬೆಂಬಲಿಸುತ್ತಾರೆ ಎಂದು ನಾವು ಬರೀ ನಂಬಬಹುದು. ನಂಬಿಕೆ ಬಿಟ್ಟು ನಮಗೆ ಬೇರೆ ಏನು ಶಕ್ತಿ ಇಲ್ಲ. ಈ ನಂಬಿಕೆಯನ್ನು MLAಗಳು ಭಂಗಪಡಿಸಬಹುದು. ಇವಾಗೆಲ್ಲಾ, ನಂಬಿಕೆಯನ್ನು ಉಲ್ಲಂಘಿಸುವುದೇ ಒಂದು ಅಭ್ಯಾಸವಾಗಬಿಟ್ಟಿದೆ.

ದೂರದೃಷ್ಟಿಯಿಂದ ನೋಡಿದರೆ, ಇಂತಹ ಸಮಸ್ಯೆಗಳಿಗೆ ಪರಿಣಾಮ ಬೇಕೆಂದರೆ, ನಮ್ಮ ಮುಂದೆ ಮೂರು ಪಥಗಳಿವೆ:

  1. ನಂಬಿಕೆಯನ್ನು ಮುರಿಯದೇ, ಸರಿಯಾದ ಪಥದಲ್ಲಿ ನಡೆಯುವ ಜನರನ್ನು MLAಯ ಕಛೇರಿಗಳಿಗೆ ತರಿಸುವುದು.
  2. ಮುಖ್ಯಮಂತ್ರಿ-ಸಚಿವರ ಕೈಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡಿ, MLAಗಳ ಶಕ್ತಿಯನ್ನು ಹೆಚ್ಚಿಸಿ, MLA-ಮತದಾರದ ಮಧ್ಯೆ ಇರುವ ಹೊಣಗಾರಿಕೆಯನ್ನು ಜಾಸ್ತಿ ಮಾಡುವುದು. ಇದಕ್ಕೆ ಸಂವಿಧಾನದಲ್ಲಿ ದೊಡ್ಡ ಬದಲಾವಣೆಗಳು ಮಾಡಬೇಕು.
  3. MLAಗಳ ಚುನಾವಣೆಯನ್ನು ಬೇರೆಮಾಡಿ, ಮುಖ್ಯಮಂತ್ರಿ-ಸಚಿವರನ್ನು ನೇರವಾದ ಚುನಾವಣೆಯಿಂದ, ಕಛೇರಿಗೆ ತರಿಸುವುದು. ಇದಕ್ಕೂ, ಸಂವಿಧಾನದಲ್ಲಿ ದೊಡ್ಡ ಬದಲಾವಣೆಗಳು ಮಾಡಬೇಕು.

ಪೂರ್ತಿ ವ್ಯವಸ್ಥೆಯೇ ಬೀಳುವ ಸ್ತಿಥಿ ಬಿಟ್ಟರೆ, ಇರುವ ಪಥಗಳು ಇವೆ. ಪ್ರತ್ಯೇಕ ಪಥದಲ್ಲಿಯೂ ಅದಚನೆಗಳಿವೆ, ಸವಾಲುಗಳಿವೆ. ಯಾವ ಒಂದು ಪಥವು ನಮಗೆ ಸುಲಭವಾದ ಪರಿಣಾಮವನ್ನು ನೀಡುವುದಿಲ್ಲ. ಆದರೆ, ಈ ಮೂರು ಪಥಗಳು ಪೂರ್ಣ ಕುಸಿತಗಿಂತ ವಾಸಿ.

ಇವೆಲ್ಲಾ ‘ಏನು’ ಮಾಡಬೇಕು ಎನ್ನುವ ಪ್ರಶ್ನೆಗಳು. ‘ಹೇಗೆ’ ಮಾಡಬೇಕು ಎನ್ನುವ ಪ್ರಶ್ನೆಗೆ ಸುಲಭವಾದ ಉತ್ತರಗಳು ಇಲ್ಲ. ಆದರೆ ಒಂದು ಮಾತು ಸ್ಪಷ್ಟ: ಇಂತಹ ಬದಲಾವಣೆಗಳು ಪ್ರಜೆಗಳ ಭಾಗವಹಿಸುವಿಕೆ ಇಲ್ಲದೆ ಬರುವುದಿಲ್ಲ. ನಾವು ಪ್ರಜೆಗಳಂತೆ, ಆಡಳಿತದ ಸಮಸ್ಯೆಗಲ್ಲಲಿ ಸಕ್ರಿಯತೆಯನ್ನು ಹೆಚ್ಚಿಸಬೇಕು. ಹಾಗೆಯೇ, ಸಕ್ರಿಯತೆಯ ಜೊತೆಗೆ, ರಾಜಕೀಯ ಸಮಸ್ಯೆಗಳಲ್ಲ್ಲಿ ಪ್ರಜೆಯ ಪಾತ್ರಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕು.


English Section

The latest elections in Karnataka have been the messiest I can remember. That’s saying something, given that between 2005 and 2013, we saw six different administrations made up of all sorts of coalitions, constantly trying to bring down their opposition while being brought down themselves.

Much of this mess lies outside the control of ordinary citizens and voters. As I’d mentioned before, we don’t vote for parties or chief ministers in our elections, we vote for MLAs (Members of the Legislative Assembly). Once the MLAs get their seats, voters lose any direct control over the election outcomes. This is how the system has been designed.

Once the MLAs take their seats, appointments to the state cabinet become a matter of goodwill for citizens, of trusting that the MLAs will support an executive representing peoples’ interests. This trust can be violated. Nowadays, it is unfortunately the norm for such trust to be violated.

In the long-term, there are only three ways this problem can be resolved:

  1. Elect better MLAs who are less likely to violate the trust that voters put in them.
  2. Push for deep constitutional changes that will reduce the power of parties and party leaders, devolve decision-making power down to individual MLAs, and increase the accountability of MLAs to their voters.
  3. Push for deep constitutional changes which allow voters to directly elect a cabinet and a chief minister, separating the role of the MLA from the state executive’s appointment process.

Apart from a full systemic breakdown, these are the three broad paths that the election process can take in the future. Each of these three comes with its own set of challenges and it would be foolish to think that any of them are panacea. But on the whole, any of these three would be better than a full-scale constitutional crisis.

The changes required are essentially ‘what’ needs to be done. ‘How’ these are to be achieved is a difficult question to answer. One thing is clear though: none of these changes will take place without sufficient public pressure and citizen participation. As citizens, all of us need to increase our activeness in governance, as well as introspect more on our roles in political processes.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s